Print

ಸಂತ ಅಂತೋನಿ ಧರ್ಮಕೇಂದ್ರದ ಧರ್ಮಗುರುಗಳದ ವಂದನೀಯ ಫಾದರ್ ಸೈಮನ್ ಡಿ’ಸೋಜ ಇವರು ಆರು ವರ್ಷಗಳ ಕಾಳ ತಮ್ಮ ಸಮರ್ಪಿತ ಸೇವೆಯನ್ನು ನೀಡಿ ಇದೀಗ ಪೆರುವಾಯಿ ಧರ್ಮಕೇಂದ್ರಕ್ಕೆ ವರ್ಗಾವಣೆಗೊಳ್ಳುವ ಸಂದರ್ಭದಲ್ಲಿ ನಾರಾವಿ ಚರ್ಚ್ ವತಿಯಿಂದ ಬೀಳ್ಕೊಡುವ ಸಮಾರಂಭವನ್ನು ಏರ್ಪಡಿಸಲಾಗಿತ್ತು. ವಂದನೀಯ ಡಾ| ಆಲ್ವಿನ್ ಸೆರವೊರವರು ಪಾ| ಸೈಮನ್ ಡಿ’ಸೋಜ ಇವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಅವರಿಗೆ ಶುಭಕೋರಿದರು. ವೀದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಸಂಜಯ್ ಮಿರಾಂದ, ಕಾರ್ಯದರ್ಶಿ ಶ್ರೀಮತಿ ಎವ್ಜಿನ್ ರೊಡ್ರಿಗಸ್, ಸುಪೀರಿಯರ್ ಸಿಸ್ಟರ್ ಮಾರಿ ಸೆಲಿನ್ ಮಿಸ್ಕಿತ್ ಉಪಸ್ಥಿತರಿದ್ದು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಧರ್ಮಗುರುಗಳನ್ನು ಗೌರವಿಸಲಾಯಿತು. ಶ್ರೀ ವಿನ್ಸೆಂಟ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಚರ್ಚ್‍ನ ಎಲ್ಲಾ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.