Print

Sep 13 : ಬೆಳ್ತಂಗಡಿ ವಲಯದ ಎಲ್ಲಾ ಕಥೋಲಿಕ್ ಚರ್ಚ್‍ಗಳ ಧರ್ಮಗುರುಗಳು ನರೆಹಾವಳಿಯಿಂದ ಹಾನಿಗೊಳಗಾದ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಶ್ರೀ ಸುಂದರ ಗೌಡ ಇವರ ಮನೆಯ ಸುತ್ತಲೂ ಜರಿದ ಮಣ್ಣನ್ನು ತೆರವು ಗೊಳಿಸುವ ಮೂಲಕ ಒಂದು ದಿನದ ಶ್ರಮದಾನವನ್ನು ನಡೆಸಿದರು.

ಮಂಗಳೂರು ಧರ್ಮ ಪ್ರಾಂತ್ಯದ ಸರಿಸುಮಾರು 130 ಚರ್ಚ್‍ಗಳಿಂದ ಧನ ಸಹಾಯ ಹಾಗೂ ವಿವಿಧ ಅಗತ್ಯ ವಸ್ತುಗಳನ್ನು ಒಟ್ಟುಗೂಡಿಸಿ ನೆರೆ ಹಾವಳಿಗೆ ತುತ್ತಾದ ಜನರಿಗೆ ಪಾವತಿಸುವ ಕೆಲಸದ ಜವಾಬ್ದಾರಿಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಸ್ವಾಮಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.

ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಸ್ವಾಮಿ ಬೊನವೆಂಚರ್ ನಜ್ರೆತ್ ಹಾಗೂ ವಿಮುಕ್ತಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಸ್ವಾಮಿ ವಿನೋದ್ ಮಸ್ಕರೇನ್ಹಸ್ ರವರ ಮುಂದಾಳತ್ವದಲ್ಲಿ ನಡೆದ ಈ ಶ್ರಮದಾನ ಶ್ಲಾಘನೀಯವಾದುದು.