Print

ಸಂತ ಅಂತೋನಿ ಚರ್ಚ್, ನಾರಾವಿಯಲ್ಲಿ ಪೋಪ್ ಸ್ವಾಮಿಯವರ ಕರೆಗೆ ಸ್ಪಂದಿಸಿ, ‘ಲಾವ್ದಾತೊ ಸಿ’ ಎಂಬ ಕಾರ್ಯಕ್ರಮದಡಿ ಗಿಡ ಬೆಳೆಸಿ-ನಾಡು ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ವನಮಹೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಗುರುಗಳಾದ ವಂದನೀಯ ಸ್ವಾಮಿ ಸೈಮನ್ ಡಿ’ಸೋಜ ರವರು ವಹಿಸಿ ಮುಖ್ಯ ಅತಿಥಿಗಳಾಗಿ ವೇಣೂರು ವಲಯದ ಅರಣ್ಯಾಧಿಕಾರಿಯವರಾದ ಶ್ರೀ ಪ್ರಶಾಂತ್ ಪೈ ಆಗಮಿಸಿ ಸಾಂಕೇತಿಕವಾಗಿ ಗಿಡ ನೆಡಲಾಯಿತು. ಕಾರ್ಯಕ್ರಮದಲ್ಲಿ ನಾರಾವಿ ಅರಣ್ಯಾಧಿಕಾರಿ ಶ್ರೀ ಅಜಿತ್ ಕುಮಾರ್, ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ, ಚರ್ಚ್ ಉಪಾಧ್ಯಕ್ಷರಾದ ಶ್ರೀ ವಿನ್ಸೆಂಟ್ ರೊಡ್ರಿಗಸ್, Iಅಙಒ ಅಧ್ಯಕ್ಷ ಶ್ರೀ ಜೋಯಲ್ ರೊಡ್ರಿಗಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 1750 ವಿವಿಧ ಸಸಿಗಳನ್ನು ಚರ್ಚ್ ಬಾಂಧವರಿಗೆ ವಿತರಿಸಲಾಯಿತು.