St. Antony Naravi

 

Dec 5, 2019 : ಸಂತ ಅಂತೋನಿ ಕಾಲೇಜು ವತಿಯಿಂದ ನಾರಾವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಪುರುಷರ ಪ್ರೋ ಕಬಡ್ಡಿ ಹಾಗೂ ಮಕ್ಕಳಿಗೆ ಜೂನಿಯರ್ ಕಬಡ್ಡಿಯನ್ನು ಆಯೋಜಿಸಲಾಗಿತ್ತು. ಸಂತ ಅಂತೋನಿ ಸಂಸ್ಥೆಗಳ ಸ್ಥಾಪಕರಾದ ವಂದನೀಯ ಫಾ| ಫಾವುಸ್ತಿನ್ ಕೋರ್ಟಿಯವರ ಸ್ಮರಣಾರ್ಥ ಸಮಾಜದಲ್ಲಿ ಸೌಹಾರ್ದತೆಯನ್ನು ಸಾರುವ ಸಂದೇಶವನ್ನು ಈ ಮೂಲಕ ಸಾರಲಾಯಿತು.

ಉದ್ಘಾಟನೆಯನ್ನು ಮಡಂತ್ಯಾರಿನ ಆಶಾದೀಪ ಸಂಸ್ಥೆಯ ಸುಪೀರಿಯರ್ ವಂದನೀಯ ಫಾ| ಲ್ಯಾನ್ಸಿ ಡಿ’ಸೋಜ ನೆರವೇರಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾ| ಸೈಮನ್ ಡಿ’ಸೋಜರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಜಗದೀಶ್ ಅಂಚನ್ ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕು. ಜೋಯ್ಲಿನ್ ಲೋಬೊ, ಶ್ರೀ ರೋಹನ್ ಲುವಿಸ್ ಹಾಗೂ ಶ್ರೀ ನಿಮಿತ್ ಜೈನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಧ್ಯಕ್ಷರಾದ ಶ್ರೀ ವಿನ್ಸೆಂಟ್ ಫೆರ್ನಾಂಡಿಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾ| ಅರುಣ್ ವಿಲ್ಸನ್ ಲೋಬೊ, ಉಪಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹ ಹಾಗೂ ಸಹ ವ್ಯವಸ್ಥಾಪಕರಾದ ಶ್ರೀ ಅನಿಲ್ ರೋಶನ್ ಅವರ ನೇತ್ರತ್ವದಲ್ಲಿ ಈ ಪಂದ್ಯಾಟವು ಯಶಸ್ವಿಯಾಗಿ ನೆರವೇರಿತು.

Comments powered by CComment

Home | About | Institution News | Parish News  | Sitemap| Contact

Copyright ©2015 www.stantonynaravi.com. Powered by eCreators

Contact Us

St. Antony, Naravi
Naravi Post 574109
Belthangady Taluk
Tel : 08258-277231