Oct 5 : ಸಂತ ಅಂತೋನಿ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳಿಗೆ ರ್ಯಾಗಿಂಗ್, ಡ್ರಗ್ ಅಬ್ಯೂಸ್, ಪರಿಸರ ಸಂರಕ್ಷಣೆ, ಲೈಂಗಿಕ ಕಿರುಕುಳ ಈ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಾಗಾರವನ್ನು ಅಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ವಂ| ಸ್ವಾಮಿ ಸೈಮನ್ ಡಿ’ಸೋಜರವರು ವಹಿಸಿದ್ದರು. ಸೈಂಟ್ ಥಾಮಸ್ ಕಾಲೇಜು, ಬೆಳ್ತಂಗಡಿಯ ಪ್ರಾಂಶುಪಾಲರಾದ ಪ್ರೊ. ಪಿ.ಪಿ. ಜೋಸೆಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಸ್ಥಾಪಕರಾದ ಫಾ| ಫಾವೊಸ್ತಿನ್ ಕೋರ್ಟಿಯವರನ್ನು ಸ್ಮರಿಸಿ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಲಾಯಿತು. ಅಡ್ವೋಕೇಟ್ ಶೈಲೇಶ್ ಆರ್. ರೋಸರ್ ರವರ ನೇತೃತ್ವದಲ್ಲಿ ಅಡ್ವೋಕೇಟ್ ಸುಭಾಷಿಣಿ ಅನಂತ್, ಅಡ್ವೊಕೇಟ್ ಮಮ್ತಾಜ್ ಬೇಗಂ, ಅಡ್ವಕೇಟ್ ಪ್ರಿಯಾಂಕಾರವರು ಮೇಲಿನ ವಿಷಯಗಳ ಕುರಿತು ಮಾಹಿತಿ ನೀಡಿದರು.

ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಅಲೋಶಿಯಸ್ ಲೋಬೊ, ಕಾಲೇಜಿನ ಪ್ರಾಂಶುಪಾಲರಾದ ವಂ| ಸ್ವಾಮಿ ಅರುಣ್ ವಿಲ್ಸನ್ ಲೋಬೊ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಶರ್ಮಿಳಾ ಉಪಸ್ಥಿತರಿದ್ದರು. ಪ್ರಾಂಶುಪಾಲರು ಸ್ವಾಗತಿಸಿ, ಶ್ರೀಮತಿ ಶರ್ಮಿಳಾ ವಂದಿಸಿದರು. ವಿದ್ಯಾರ್ಥಿನಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.