St. Antony Naravi

 

June 23, 2018 : ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ರಮ್ಜಾನ್ ಹಬ್ಬವನ್ನು ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊರವರು ವಹಿಸಿ, ಎಲ್ಲಾ ಹಬ್ಬಗಳು ಪರಸ್ಪರ ಗೌರವಿಸಲು ಹಾಗೂ ಸಾಮರಸ್ಯದಿಂದ ಬದುಕಲು ಪ್ರೇರಣೆಯಾಗಿವೆ ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಹಳೆ ವಿದ್ಯಾರ್ಥಿ, ಜನಬಿಂಬ ಹಾಗೂ ನಮ್ಮ ಬೆದ್ರ ಪತ್ರಿಕೆಯ ಪತ್ರಕರ್ತ ಶ್ರೀ ಹ್ಯಾರಿಸ್‍ರವರು ರಮ್ಜಾನ್ ಹಬ್ಬ ಇತರರ ಕಷ್ಟ-ಸಂಕಷ್ಟಗಳನ್ನು ಅರಿತು, ಸಹಾಯ ಮಾಡುವಂತಹ ಹಬ್ಬ ಎಂದು ತಿಳಿಸಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಶ್ರೀ ದಿನೇಶ್ ಬಿ.ಕೆ, ಹಾಗೂ ಶ್ರೀಮತಿ ವಿಲ್ಮಾ ಪಿಂಡೊ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತಜ್ವೀನಾ ಸ್ವಾಗತಿಸಿ, ರಫೀಕ್ ವಂದಿಸಿದರು. ಫರ್ಜಾನಾ ಕಾರ್ಯಕ್ರಮ ನಿರೂಪಿಸಿದರು.

Comments powered by CComment

Home | About | Institution News | Parish News  | Sitemap| Contact

Copyright ©2015 www.stantonynaravi.com. Powered by eCreators

Contact Us

St. Antony, Naravi
Naravi Post 574109
Belthangady Taluk
Tel : 08258-277231