ನವೆಂಬರ್ 14, 2017: ಸಂತ ಅಂತೋನಿ ಕಾಲೇಜು, ನಾರಾವಿ ಹಾಗೂ ದ.ಕ. ಜಿಲ್ಲಾ ಅಮೇಚೂರ್ ಕಬಡ್ಡಿ ಸಂಸ್ಥೆ ಇದರ ಸಹಯೋಗದಲ್ಲಿ ನಾಲ್ಕನೇ ವರ್ಷದ ಫಾದರ್ ಕೋರ್ಟಿ ಸ್ಮಾರಕ ಸೌಹಾರ್ದ ಟ್ರೋಫಿ, ಪುರುಷರ ಪ್ರೋ ಕಬಡ್ಡಿ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟವು 12-11-2017 ರಂದು ದಿ| ಫಾ| ಪಾವ್ಲ್ ಫೆರ್ನಾಂಡಿಸ್ ಸ್ಮಾರಕ ಕ್ರೀಡಾಂಗಣ, ನಾರಾವಿ ಚರ್ಚ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಸ್ವಾಮಿ ಸೈಮನ್ ಡಿ’ಸೋಜ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶ್ರೀ ಸುಕೇಶ್ ಹೆಗ್ಡೆ, ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಮತ್ತು ಗುಜರಾತ್ ಫಾರ್ಚೂನ್ ಜಯಂಟ್ಸ್ ಇದರ ನಾಯಕಿವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ ಪ್ರಾಸ್ತಾವಿಕ ಭಾಷಣ ಮಾಡಿದರು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಸ್ವಾಮಿ ಲ್ಯಾನ್ಸಿ ಸಲ್ಡಾನ್ಹಾ ಉಪಸ್ಥಿತರಿದ್ದರು. ಸಹ ವ್ಯವಸ್ಥಾಪಕರಾದ ಶ್ರೀ ಅನಿಲ್ ರೋಶನ್ ಹಾಗೂ ಶ್ರೀ ಸಂತೋಷ್ ಸಲ್ಡಾನ್ಹಾ ಸಹಕರಿಸಿದರು.

 

 

 

 

 

 

Fr Cortie Memorial Trophy at Naravi

St Antony College, Naravi organized Fr Cortie Memorial Trophy - Pro Kabaddi & Throw ball match. Mr Sukesh Hegde, International Kabaddi player was felicitated on the occasion. Rev. Fr Simon D Souza - Parish Priest, Rev. Fr Arun Wilson Lobo - Principal and Rev. Fr Lancy Saldanha - Head Master were present.