ಇತ್ತೀಚೆಗೆ ಸಂತ ಅಂತೋನಿ ಕಾಲೇಜಿನಲ್ಲಿ ಕಾಮರ್ಸ್ ವಿದ್ಯಾರ್ಥಿಗಳಿಗೆ 'ANOKHA 2K17’ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂಚಾಲಕರಾದ ವಂದನೀಯ ಸ್ವಾಮಿ ಲುವಿಸ್ ಕುಟಿನ್ಹಾರವರು ವಹಿಸಿ, ವಿಭಿನ್ನ ಪ್ರತಿಭೆಗಳ ಮುಖಾಂತರ ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಯನ್ನು ಮಾಡಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ, ಉಪಪ್ರಾಂಶುಪಾಲರಾದ ಶ್ರೀ ಸಂತೋಷ್ ಸಲ್ಡಾನ್ಹ, ವಾಣಿಜ್ಯ ಸಂಘದ ಮೇಲ್ವಿಚಾರಕರಾದ ಕು. ಶಲ್ಮಾ ಗೊನ್ಸಾಲ್ವಿಸ್, ವಿದ್ಯಾರ್ಥಿ ಸಂಘದ ನಾಯಕ ತೀರ್ಥೇಶ್‍ಕುಮಾರ್ ಹಾಗೂ ವಾಣಿಜ್ಯ ಸಂಘದ ವಿದ್ಯಾರ್ಥಿ ನಾಯಕರಾದ ಪ್ರಸನ್ನ ಕರ್ಮಾರ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಪಂಗಡಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.