ಜುಲೈ ಮೊದಲ ವಾರದಂದು ಸಂತ ಪಾವ್ಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತು ಹಾಗೂ ಶಾಲಾ ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಅಧ್ಯಕ್ಷರಾಗಿ ವಂದನೀಯ ಸ್ವಾಮಿ ಲೂವಿಸ್‍ ಕುಟಿನ್ಹಾ, ಮುಖ್ಯ ಅತಿಥಿಗಳಾಗಿ ವಂದನೀಯ ಸ್ವಾಮಿ ಅರುಣ್ ವಿಲ್ಸನ್ ಲೋಬೊ, ಶಾಲಾ ಮುಖ್ಯೋಪಾಧ್ಯಾಯರಾದ ವಂದನೀಯ ಸ್ವಾಮಿ ಲ್ಯಾನ್ಸಿ ಜೋಯಲ್ ಸಲ್ಡಾನಾ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿಯಾದ ಶ್ರೀಮತಿ ಮೇಬಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

 

 

ವಿದ್ಯಾರ್ಥಿನಿ ಕು. ಅನುಶ್ರೀ ಸ್ವಾಗತಿಸಿದಳು. ದೀಪ ಬೆಳಗಿಸಿ, ಶಾಲಾ ಸಂಸತ್ತಿನ ಬ್ಯಾನರನ್ನು ಮುಖ್ಯ ಅತಿಥಿಗಳಿಂದ ಉದ್ಘಾಟಿಸಲಾಯಿತು. ಶಾಲಾ ಸಂಸತ್ತಿನ ಅಭ್ಯರ್ಥಿಗಳು ಪ್ರತಿಜ್ಞಾ ವಿಧಿಯನ್ನು ಶಾಲಾ ಮುಖ್ಯೋಪಾಧ್ಯಾಯರಿಂದ ಸ್ವೀಕರಿಸಿದರು. 2015 -16ರ ಸಾಲಿನ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ನಮ್ಮ ಶಾಲೆಯ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಶಾಲಾ ಸಂಘಗಳಿಂದ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಕೊನೆಗೆ ವನಮಹೋತ್ಸವದ ಕಾರ್ಯಕ್ರಮ ನಡೆಸಿ ಗಿಡವನ್ನು ನೆಡಲಾಯಿತು. ಗಣ್ಯರು ಸಭೆಯನ್ನುದ್ದೇಶಿಸಿ ಹಿತವಚನವನ್ನು ನೀಡಿದರು. ವಿದ್ಯಾರ್ಥಿ ವಿಘ್ನೇಶ್ ಭಟ್ ವಂದನಾರ್ಪಣೆಯನ್ನು ನೆರವೇರಿಸಿದರು.